ठीक--- ---- आ- -- ल-- -ै
ठी_ है बा_ आ_ के लि_ है
ठ-क ह- ब-क- आ- क- ल-ए ह-
------------------------
ठीक है बाकी आप के लिए है 0 thee----- -a--e- -ap-ke---e---it____ h__ b_____ a__ k_ l__ h__t-e-k h-i b-a-e- a-p k- l-e h-i-------------------------------theek hai baakee aap ke lie hai
ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ.
೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ.
ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು.
ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು.
ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ.
ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ.
ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ.
ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ.
ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ.
ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ.
ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ.
ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ.
ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು.
ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ.
ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು.
ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ.
ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ.
ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ.
ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ.
ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ.
ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ.
ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು.
ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ.
ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ.
ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ.
ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು.
ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ.
ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....