ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ha Siyayya

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [hamsin da hudu]

Siyayya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೌಸಾ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. I-- -o-i---a----y---a I__ s_ i_ s___ k_____ I-a s- i- s-y- k-a-t- --------------------- Ina so in saya kyauta 0
ಆದರೆ ತುಂಬಾ ದುಬಾರಿಯದಲ್ಲ. A-m----b--a-in-da y--yi t---a. A___ b___ a___ d_ y_ y_ t_____ A-m- b-b- a-i- d- y- y- t-a-a- ------------------------------ Amma babu abin da ya yi tsada. 0
ಬಹುಶಃ ಒಂದು ಕೈ ಚೀಲ? Wa--ƙila --ka- --nnu? W_______ j____ h_____ W-t-ƙ-l- j-k-r h-n-u- --------------------- Wataƙila jakar hannu? 0
ಯಾವ ಬಣ್ಣ ಬೇಕು? Wa-i--a-ni --k----? W___ l____ k___ s__ W-n- l-u-i k-k- s-? ------------------- Wani launi kuke so? 0
ಕಪ್ಪು, ಕಂದು ಅಥವಾ ಬಿಳಿ? B--i- la--in ru-an -a-a ko-fa-i? B____ l_____ r____ k___ k_ f____ B-k-, l-u-i- r-w-n k-s- k- f-r-? -------------------------------- Baki, launin ruwan kasa ko fari? 0
ದೊಡ್ಡದೋ ಅಥವಾ ಚಿಕ್ಕದೋ? Bab--n ko kara--? B_____ k_ k______ B-b-a- k- k-r-m-? ----------------- Babban ko karami? 0
ನಾನು ಇವುಗಳನ್ನು ಒಮ್ಮೆ ನೋಡಬಹುದೆ? zan i-----n-n -an-an z__ i__ g____ w_____ z-n i-a g-n-n w-n-a- -------------------- zan iya ganin wannan 0
ಇದು ಚರ್ಮದ್ದೇ? Fa-a -e? F___ n__ F-t- n-? -------- Fata ne? 0
ಅಥವಾ ಪ್ಲಾಸ್ಟಿಕ್ ನದ್ದೇ ? Ko----a -- y--s---d- fi-a-ti-? K_ k___ a_ y_ s__ d_ f________ K- k-m- a- y- s-i d- f-l-s-i-? ------------------------------ Ko kuma an yi shi da filastik? 0
ಖಂಡಿತವಾಗಿಯು ಚರ್ಮದ್ದು. F---- ba sha---. F____ b_ s______ F-t-, b- s-a-k-. ---------------- Fata, ba shakka. 0
ಇದು ಉತ್ತಮ ದರ್ಜೆಯದು. W--------n- -- ---a-ci n- mu--m-a-. W_____ y___ d_ i______ n_ m________ W-n-a- y-n- d- i-g-n-i n- m-s-m-a-. ----------------------------------- Wannan yana da inganci na musamman. 0
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. Ku-a--ak-----n-u---na d- ar-a-sosai. K___ j____ h____ t___ d_ a___ s_____ K-m- j-k-r h-n-u t-n- d- a-h- s-s-i- ------------------------------------ Kuma jakar hannu tana da arha sosai. 0
ಇದು ನನಗೆ ತುಂಬ ಇಷ್ಟವಾಗಿದೆ. I-a------hi I__ s__ s__ I-a s-n s-i ----------- Ina son shi 0
ನಾನು ಇದನ್ನು ತೆಗೆದುಕೊಳ್ಳುತ್ತೇನೆ. Z-- -a---. Z__ d_____ Z-n d-u-a- ---------- Zan dauka. 0
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? Zan i-a -usan-----? Z__ i__ m______ s__ Z-n i-a m-s-n-a s-? ------------------- Zan iya musanya su? 0
ಖಂಡಿತವಾಗಿಯು. I-m---. I m____ I m-n-. ------- I mana. 0
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. Z--m---a-e--u a-m--sayi- k-a----. Z_ m_ n___ s_ a m_______ k_______ Z- m- n-d- s- a m-t-a-i- k-a-t-i- --------------------------------- Za mu nade su a matsayin kyautai. 0
ಅಲ್ಲಿ ನಗದು ಪಾವತಿ ಸ್ಥಳ ಇದೆ. I--imin---g- b-----ya---can. I______ b___ b____ y___ c___ I-g-m-n b-g- b-c-n y-n- c-n- ---------------------------- Ingimin buga bocan yana can. 0

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.