ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   uz savollar bering 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [oltmish ikki]

savollar bering 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉಜ್ಬೆಕ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. o----i-h o_______ o-g-n-s- -------- organish 0
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? Ta---ala----- narsa----r-a--sh-----? T________ k__ n______ o_____________ T-l-b-l-r k-p n-r-a-i o-g-n-s-a-i-i- ------------------------------------ Talabalar kop narsani organishadimi? 0
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Y----ular-oz-i-a-org-ni-ha-i. Y___ u___ o_____ o___________ Y-q- u-a- o-g-n- o-g-n-s-a-i- ----------------------------- Yoq, ular ozgina organishadi. 0
ಪ್ರಶ್ನಿಸುವುದು sora-g s_____ s-r-n- ------ sorang 0
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? Si- -----v---da- te----z-sor-ys-zmi? S__ o___________ t______ s__________ S-z o-i-u-c-i-a- t-z-t-z s-r-y-i-m-? ------------------------------------ Siz oqituvchidan tez-tez soraysizmi? 0
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Yo-- m----n-an---z--e--s----aym--. Y___ m__ u____ t______ s__________ Y-q- m-n u-d-n t-z-t-z s-r-m-y-a-. ---------------------------------- Yoq, men undan tez-tez soramayman. 0
ಉತ್ತರಿಸುವುದು. ja-o- ----ng j____ b_____ j-v-b b-r-n- ------------ javob bering 0
ದಯವಿಟ್ಟು ಉತ್ತರ ನೀಡಿ. I-ti-os---vo---e--ng. I______ j____ b______ I-t-m-s j-v-b b-r-n-. --------------------- Iltimos javob bering. 0
ನಾನು ಉತ್ತರಿಸುತ್ತೇನೆ. Men ----b b-r--an. M__ j____ b_______ M-n j-v-b b-r-m-n- ------------------ Men javob beraman. 0
ಕೆಲಸ ಮಾಡುವುದು i-h i__ i-h --- ish 0
ಈಗ ಅವನು ಕೆಲಸ ಮಾಡುತ್ತಿದ್ದಾನಾ? U --z-- ish-a--pt---? U h____ i____________ U h-z-r i-h-a-a-t-m-? --------------------- U hozir ishlayaptimi? 0
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. H-- u-ho-ir--sh-ayap--. H__ u h____ i__________ H-, u h-z-r i-h-a-a-t-. ----------------------- Ha, u hozir ishlayapti. 0
ಬರುವುದು. k-l k__ k-l --- kel 0
ನೀವು ಬರುತ್ತೀರಾ? Ke-? K___ K-l- ---- Kel? 0
ಹೌದು, ನಾವು ಬೇಗ ಬರುತ್ತೇವೆ. Ha- b------ir-bo--miz. H__ b__ h____ b_______ H-, b-z h-z-r b-l-m-z- ---------------------- Ha, biz hozir bolamiz. 0
ವಾಸಿಸುವುದು. ya--ash y______ y-s-a-h ------- yashash 0
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? B-r-i-da-yas-a-s---i? B_______ y___________ B-r-i-d- y-s-a-s-z-i- --------------------- Berlinda yashaysizmi? 0
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Ha, me--Ber-ind---as-ay--n. H__ m__ B_______ y_________ H-, m-n B-r-i-d- y-s-a-m-n- --------------------------- Ha, men Berlinda yashayman. 0

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.