Ти -а -ог--писа?
Т_ н_ к___ п____
Т- н- к-г- п-с-?
----------------
Ти на кого писа? 0 Ti ---k--- p-sa?T_ n_ k___ p____T- n- k-g- p-s-?----------------Ti na kogo pisa?
ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ.
ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು.
ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ.
ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು.
ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು.
ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು.
ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು.
ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು.
ಅದು “ಡಾ” ಎಂಬ ಪದಭಾಗವಾಗಿತ್ತು.
ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ.
ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು.
ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು.
ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು.
ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು.
ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು.
ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು.
ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು.
ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು.
ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ.
ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ.
ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು.
ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು.
ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ.
ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ.
ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ.
ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ.
ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ.
ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.