П-и-о--т--скоро -нов- в ---ти!
П________ с____ с____ в г_____
П-и-о-и-е с-о-о с-о-а в г-с-и-
------------------------------
Приходите скоро снова в гости! 0 Pr-k--di-e---o-- s--v- v-gos-i!P_________ s____ s____ v g_____P-i-h-d-t- s-o-o s-o-a v g-s-i--------------------------------Prikhodite skoro snova v gosti!
ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ.
ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ!
ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ.
ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ.
ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ.
ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು.
ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು.
ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ.
ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ.
ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ.
ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ.
ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ.
ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ.
ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು.
ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು.
ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು.
ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು.
ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು.
ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು.
ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು.
ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ.
ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು.
ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು.
ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು.
ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು.
ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ.
ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ.
ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....