ಪದಗುಚ್ಛ ಪುಸ್ತಕ

kn ಬಣ್ಣಗಳು   »   uz Ranglar

೧೪ [ಹದಿನಾಲ್ಕು]

ಬಣ್ಣಗಳು

ಬಣ್ಣಗಳು

14 [on tort]

Ranglar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉಜ್ಬೆಕ್ ಪ್ಲೇ ಮಾಡಿ ಇನ್ನಷ್ಟು
ಮಂಜು ಬಿಳಿ ಬಣ್ಣ. Q-r oq. Q__ o__ Q-r o-. ------- Qor oq. 0
ಸೂರ್ಯ ಹಳದಿ ಬಣ್ಣ. Quy--h s-r--. Q_____ s_____ Q-y-s- s-r-q- ------------- Quyosh sariq. 0
ಕಿತ್ತಳೆ, ಕೆಂಪು ಮಿಶ್ರಿತ ಹಳದಿ ಬಣ್ಣ. Ape--in--oq -a-iq r--gga e--. A______ t__ s____ r_____ e___ A-e-s-n t-q s-r-q r-n-g- e-a- ----------------------------- Apelsin toq sariq rangga ega. 0
ಚೆರಿ ಹಣ್ಣು ಕೆಂಪು ಬಣ್ಣ. G-l-s---z--. G____ q_____ G-l-s q-z-l- ------------ Gilos qizil. 0
ಆಕಾಶ ನೀಲಿ ಬಣ್ಣ. O-m-- -----. O____ m_____ O-m-n m-v-y- ------------ Osmon moviy. 0
ಹುಲ್ಲು ಹಸಿರು ಬಣ್ಣ. Ma--- y-shil. M____ y______ M-y-a y-s-i-. ------------- Maysa yashil. 0
ಭೂಮಿ ಕಂದು ಬಣ್ಣ. Y-- j--arran-. Y__ j_________ Y-r j-g-r-a-g- -------------- Yer jigarrang. 0
ಮೋಡ ಬೂದು ಬಣ್ಣ. Bu-----ul----. B____ k_______ B-l-t k-l-a-g- -------------- Bulut kulrang. 0
ಟೈರ್ ಗಳು ಕಪ್ಪು ಬಣ್ಣ. S----la---ora. S_______ q____ S-i-a-a- q-r-. -------------- Shinalar qora. 0
ಮಂಜು ಯಾವ ಬಣ್ಣ? ಬಿಳಿ. Qorni-g --ngi -a--------. Q______ r____ q______ O__ Q-r-i-g r-n-i q-n-a-? O-. ------------------------- Qorning rangi qanday? Oq. 0
ಸೂರ್ಯ ಯಾವ ಬಣ್ಣ? ಹಳದಿ. Q-yo-- -an-ay rang-a?-Sari-. Q_____ q_____ r______ S_____ Q-y-s- q-n-a- r-n-d-? S-r-q- ---------------------------- Quyosh qanday rangda? Sariq. 0
ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ. T-q --r-- r-n--qand-y--Apel-i-. T__ s____ r___ q______ A_______ T-q s-r-q r-n- q-n-a-? A-e-s-n- ------------------------------- Toq sariq rang qanday? Apelsin. 0
ಚೆರಿ ಯಾವ ಬಣ್ಣ? ಕೆಂಪು ಬಣ್ಣ. Gi-o- --n-ay -an-d-?-Q-z--. G____ q_____ r______ Q_____ G-l-s q-n-a- r-n-d-? Q-z-l- --------------------------- Gilos qanday rangda? Qizil. 0
ಆಕಾಶ ಯಾವ ಬಣ್ಣ? ನೀಲಿ ಬಣ್ಣ. O-mo- --ys---a---a?-Mo--y. O____ q____ r______ M_____ O-m-n q-y-i r-n-d-? M-v-y- -------------------------- Osmon qaysi rangda? Moviy. 0
ಹುಲ್ಲು ಯಾವ ಬಣ್ಣ? ಹಸಿರು ಬಣ್ಣ. O- q--d-y-r-----?--ash--. O_ q_____ r______ Y______ O- q-n-a- r-n-d-? Y-s-i-. ------------------------- Ot qanday rangda? Yashil. 0
ಭೂಮಿ ಯಾವ ಬಣ್ಣ?ಕಂದು ಬಣ್ಣ. Yer-qa-day-r-n-da? -i---ra-g. Y__ q_____ r______ J_________ Y-r q-n-a- r-n-d-? J-g-r-a-g- ----------------------------- Yer qanday rangda? Jigarrang. 0
ಮೋಡ ಯಾವ ಬಣ್ಣ?ಬೂದು ಬಣ್ಣ. Bu----qa--ay r--gda- K-lr---. B____ q_____ r______ K_______ B-l-t q-n-a- r-n-d-? K-l-a-g- ----------------------------- Bulut qanday rangda? Kulrang. 0
ಟೈರ್ ಗಳು ಯಾವ ಬಣ್ಣ? ಕಪ್ಪು ಬಣ್ಣ. Shinal---q-n-ay-r--g-a- ---a. S_______ q_____ r______ Q____ S-i-a-a- q-n-a- r-n-d-? Q-r-. ----------------------------- Shinalar qanday rangda? Qora. 0

ಮಹಿಳೆಯರು ಪುರುಷರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ.

ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು. ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ? ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ. ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ. ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ. ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ. ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ. ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ. ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ. ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ. ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ. ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ. ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ. ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ. ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ. ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ. ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು. ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು.