ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   eo En la trajno

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [tridek kvar]

En la trajno

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.