ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   eo Konjunkcioj 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [naŭdek kvar]

Konjunkcioj 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.