ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ.
೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ
ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು.
ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು.
ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ.
ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ.
ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ.
ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು.
೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು.
ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ.
ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು.
ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು.
ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ.
ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ.
ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ.
ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ.
ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ.
ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು.
ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ.
ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ
ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ
ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ.
ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ.
ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ.
ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ.
ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ.
ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು...
ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!