ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   zh 解释,说明某件事情3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77[七十七]

77 [Qīshíqī]

解释,说明某件事情3

jiěshì, shuōmíng mǒu jiàn shìqíng 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.