ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   bs Ćaskanje 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [dvadeset i jedan]

Ćaskanje 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!