ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   sk V meste

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [dvadsaťpäť]

V meste

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!