ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   el Στον ζωολογικό κήπο

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [σαράντα τρία]

43 [saránta tría]

Στον ζωολογικό κήπο

Ston zōologikó kḗpo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.