ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   cs Práce

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [padesát pět]

Práce

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜೆಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? Čím s----ví--? Č__ s_ ž______ Č-m s- ž-v-t-? -------------- Čím se živíte? 0
ನನ್ನ ಗಂಡ ವೃತ್ತಿಯಿಂದ ವೈದ್ಯರು. Mů---a-žel je --vo----m -----. M__ m_____ j_ p________ l_____ M-j m-n-e- j- p-v-l-n-m l-k-ř- ------------------------------ Můj manžel je povoláním lékař. 0
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Já --a--j--jako zd-avo-ní---s-r---a-p-- úvaz-u. J_ p______ j___ z________ s_____ n_ p__ ú______ J- p-a-u-i j-k- z-r-v-t-í s-s-r- n- p-l ú-a-k-. ----------------------------------------------- Já pracuji jako zdravotní sestra na půl úvazku. 0
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Br---p-j---- d--důc-o--. B___ p______ d_ d_______ B-z- p-j-e-e d- d-c-o-u- ------------------------ Brzy půjdeme do důchodu. 0
ಆದರೆ ತೆರಿಗೆಗಳು ತುಂಬಾ ಜಾಸ್ತಿ. A-e---ně-js-- v----é. A__ d___ j___ v______ A-e d-n- j-o- v-s-k-. --------------------- Ale daně jsou vysoké. 0
ಮತ್ತು ಆರೋಗ್ಯವಿಮೆ ದುಬಾರಿ. A-z-rav------o-iš-ě-- j- -----. A z________ p________ j_ d_____ A z-r-v-t-í p-j-š-ě-í j- d-a-é- ------------------------------- A zdravotní pojištění je drahé. 0
ನೀನು ಮುಂದೆ ಏನಾಗಲು ಬಯಸುತ್ತೀಯ? Č-m ----š -e--ou b--? Č__ c____ j_____ b___ Č-m c-c-š j-d-o- b-t- --------------------- Čím chceš jednou být? 0
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. Cht-l /--h-----by-- b-- inž-ný-em /-in--n-r---. C____ / c_____ b___ b__ i________ / i__________ C-t-l / c-t-l- b-c- b-t i-ž-n-r-m / i-ž-n-r-o-. ----------------------------------------------- Chtěl / chtěla bych být inženýrem / inženýrkou. 0
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Chc---í- na-uni---z---. C___ j__ n_ u__________ C-c- j-t n- u-i-e-z-t-. ----------------------- Chci jít na univerzitu. 0
ನಾನು ತರಬೇತಿ ಪಡೆಯುತ್ತಿದ್ದೇನೆ. Jse- na -táž-. J___ n_ s_____ J-e- n- s-á-i- -------------- Jsem na stáži. 0
ನಾನು ಹೆಚ್ಚು ಸಂಪಾದಿಸುವುದಿಲ್ಲ. Ne-y-ě-á-ám m--. N__________ m___ N-v-d-l-v-m m-c- ---------------- Nevydělávám moc. 0
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. Dě--m -táž - z-h--ni--. D____ s___ v z_________ D-l-m s-á- v z-h-a-i-í- ----------------------- Dělám stáž v zahraničí. 0
ಅವರು ನನ್ನ ಮೇಲಧಿಕಾರಿ. T---e--ůj šé-. T_ j_ m__ š___ T- j- m-j š-f- -------------- To je můj šéf. 0
ನನ್ನ ಸಹೋದ್ಯೋಗಿಗಳು ಒಳ್ಳೆಯವರು. M-m mil--sp--up-a-ov-ík-. M__ m___ s_______________ M-m m-l- s-o-u-r-c-v-í-y- ------------------------- Mám milé spolupracovníky. 0
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. V -o-edne -d--- -ž-- -o --n--ny. V p______ j____ v___ d_ k_______ V p-l-d-e j-e-e v-d- d- k-n-ý-y- -------------------------------- V poledne jdeme vždy do kantýny. 0
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. H--d-m -rá--. H_____ p_____ H-e-á- p-á-i- ------------- Hledám práci. 0
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Už--o--jse- -ez-měs--an- /--e-am---naná. U_ r__ j___ n___________ / n____________ U- r-k j-e- n-z-m-s-n-n- / n-z-m-s-n-n-. ---------------------------------------- Už rok jsem nezaměstnaný / nezaměstnaná. 0
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. V -éto----i je ----i- ----- ne--mě--na-ý-h. V t___ z___ j_ p_____ m____ n______________ V t-t- z-m- j- p-í-i- m-o-o n-z-m-s-n-n-c-. ------------------------------------------- V této zemi je příliš mnoho nezaměstnaných. 0

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.