ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   hr Veznici 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [devedeset i sedam]

Veznici 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.