ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   bn বিদেশী ভাষা শিক্ষা

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

২৩ [তেইশ]

23 [tē'iśa]

বিদেশী ভাষা শিক্ষা

bidēśī bhāṣā śikṣā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.