К----- е-го--мо.
К_____ е г______
К-ч-т- е г-л-м-.
----------------
Кучето е големо. 0 K-o-hye---ye-gu-lye-o.K________ y_ g________K-o-h-e-o y- g-o-y-m-.----------------------Koochyeto ye guolyemo.
Т-ј--ма--вт-моби-.
Т__ и__ а_________
Т-ј и-а а-т-м-б-л-
------------------
Тој има автомобил. 0 T-- i-a--vto-o-il.T__ i__ a_________T-ј i-a a-t-m-b-l-------------------Toј ima avtomobil.
Ф---о--е и-тер-сен.
Ф_____ е и_________
Ф-л-о- е и-т-р-с-н-
-------------------
Филмот е интересен. 0 Fil-----e--n-y-ry-sy--.F_____ y_ i____________F-l-o- y- i-t-e-y-s-e-.-----------------------Filmot ye intyeryesyen.
ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ.
ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ.
ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ.
ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು.
ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು.
ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ.
ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು.
ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ.
ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು.
ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ.
ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ.
ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ.
ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು.
ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ.
ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ.
ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ.
ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ.
ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು.
ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು.
ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು.
ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು.
ಇದಕ್ಕೆ ಯಾವುದೇ ಅರ್ಥ ಇರಲಿಲ್ಲ.
ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು.
ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು.
ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ.
ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು.
ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ.
ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.