ед-а-нов---ола
е___ н___ к___
е-н- н-в- к-л-
--------------
една нова кола 0 y--na-no---kolay____ n___ k___y-d-a n-v- k-l----------------yedna nova kola
ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.
ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು.
ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು.
ಇದುವರೆಗೆ ಈ ಕನಸು ನನಸಾಗಿಲ್ಲ.
ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ..
ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ.
ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು.
ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ.
ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು.
ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು.
ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ.
ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ.
ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ.
ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು.
ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು.
ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು.
ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು.
ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ.
ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ.
ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ.
ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ.
ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ.
ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು.
ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ.
ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು.
ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು.
ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ.
ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ.
ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......