Ысы- су- -----к--.
Ы___ с__ ж__ э____
Ы-ы- с-у ж-к э-е-.
------------------
Ысык суу жок экен. 0 Isı- -u- j-------.I___ s__ j__ e____I-ı- s-u j-k e-e-.------------------Isık suu jok eken.
Бул м-----ү--ө-ө-кым--т.
Б__ м__ ү___ ө__ к______
Б-л м-н ү-ү- ө-ө к-м-а-.
------------------------
Бул мен үчүн өтө кымбат. 0 Bul -e---çün ö-ö--ımba-.B__ m__ ü___ ö__ k______B-l m-n ü-ü- ö-ö k-m-a-.------------------------Bul men üçün ötö kımbat.
ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು.
ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ.
ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ.
ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ.
ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ.
ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ.
ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ.
ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ.
ಅವರು ಎಲ್ಲವನ್ನೂ ಟೀಕಿಸುತ್ತಾರೆ.
ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ.
ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ.
ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ.
ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು.
ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು.
ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು.
ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು.
ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು.
ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು.
ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ.
ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು.
ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ.
ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ.
ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.
ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ.
ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು.
ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ.
ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ.
ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!