میں اس --ظ-ک--ن-ی---م-- -ہا-ہو--
___ ا_ ل__ ک_ ن___ س___ ر__ ہ____
-ی- ا- ل-ظ ک- ن-ی- س-ج- ر-ا ہ-ں-
----------------------------------
میں اس لفظ کو نہیں سمجھ رہا ہوں- 0 m--- is la-z ko -a-i s---jh -aha h--nm___ i_ l___ k_ n___ s_____ r___ h___m-i- i- l-f- k- n-h- s-m-j- r-h- h-o--------------------------------------mein is lafz ko nahi samajh raha hoon
ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.
ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ.
ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ.
ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು.
ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ.
ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು.
ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು.
ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು.
ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು.
ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು.
ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು.
ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು.
ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು.
ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು.
ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು.
ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು.
ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು.
ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು.
ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು.
ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು.
ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ.
ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು.
ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ.
ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ.
ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ.
ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ.
ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ.
ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ.
ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.