ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು.
ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ?
ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ.
ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ.
ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ.
ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ.
ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ.
ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ.
ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ.
ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ.
ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ.
ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ.
ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ.
ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ.
ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ.
ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ.
ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ.
ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ.
ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ.
ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ.
ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ.
ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ.
ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ.
ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ.
ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ.
ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ.
ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು.
ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು.