അവൻ ----കുന-ന-.
അ__ ന______
അ-ൻ ന-ക-ക-ന-ന-.
---------------
അവൻ നടക്കുന്നു. 0 av-- -a-a-k-nn-.a___ n__________a-a- n-d-k-u-n-.----------------avan nadakkunnu.
ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ.
ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ.
ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ.
ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ.
ಸ್ವಗತ ಮಾಡಿಕೊಳ್ಳು ವುದು ಸಾಧಾರಣ.
ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ..
ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ.
ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ.
ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ.
ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು.
ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ.
ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ.
ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ.
ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ.
ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ.
ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ.
ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.
ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ.
ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ.
ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ.
ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ.
ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು.
ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ.
ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ.
ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು.
ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು.
ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು.
ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.