ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ti “ከም” ዘለዎም ንኡስ ሓሳብት

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [ተስዓንሰለስተን]

93 [tesi‘aniselesiteni]

“ከም” ዘለዎም ንኡስ ሓሳብት

“kemi” zelewomi ni’usi ḥasabiti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.