ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ti ናይ ዋንነት ቃላት 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [ሱሳንሸውዓተን]

67 [susanishewi‘ateni]

ናይ ዋንነት ቃላት 2

nayi wanineti k’alati 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.