ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ.
ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ.
ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ.
ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ.
ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ.
ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ.
ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ.
ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ.
ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ.
ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ.
ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ.
ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ.
ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ.
ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ.
ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ.
ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು.
ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು.
ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು.
ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು.
ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ.
ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು.
ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು.
ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು.
ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ.
ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು.
ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!