ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   uk Модальні дієслова у минулому 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [вісімдесят вісім]

88 [visimdesyat visim]

Модальні дієслова у минулому 2

Modalʹni diyeslova u mynulomu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.