Т-й-п-р--------одо---т---.
Т__ п___ м___ п___________
Т-й п-р- м-н- п-д-б-є-ь-я-
--------------------------
Той парк мені подобається. 0 T-y̆-park---ni--odo-----ʹ-ya.T__ p___ m___ p_____________T-y- p-r- m-n- p-d-b-y-t-s-a------------------------------Toy̆ park meni podobayetʹsya.
Я вв--а- -е-------.
Я в_____ ц_ н______
Я в-а-а- ц- н-д-и-.
-------------------
Я вважаю це нудним. 0 YA v-a-hay- t-e -udn--.Y_ v_______ t__ n______Y- v-a-h-y- t-e n-d-y-.-----------------------YA vvazhayu tse nudnym.
ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ.
ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ.
ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ.
ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ.
ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ.
ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ.
ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ.
ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ.
ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ.
ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ.
ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ.
ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ.
ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ.
ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ.
ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ.
ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ.
ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ.
ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ.
ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ.
ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De)
ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ.
ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ.
ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN).
ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ.
ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ.
ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ.
ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ.
ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.