핸드---안-가---있--?
핸___ 안 가__ 있___
핸-폰- 안 가-고 있-요-
---------------
핸드폰을 안 가지고 있어요? 0 h-e----po--eul an g-j--o -ss---y-?h_____________ a_ g_____ i________h-e-d-u-o---u- a- g-j-g- i-s-e-y-?----------------------------------haendeupon-eul an gajigo iss-eoyo?
ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ.
ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ.
ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ.
ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು.
ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ.
ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ.
ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ..
ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ.
ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ.
ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ.
ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ.
ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ.
ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು.
ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ.
ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ.
ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ.
ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ.
ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ.
ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ.
ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ.
ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ..
ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ.
ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ.
ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ.
ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು.
ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ.
ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ.
ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!