육개-은-- --에-.
육___ 반 년____
육-월- 반 년-에-.
------------
육개월은 반 년이에요. 0 yugga--ol--u---an--yeo-----o.y____________ b__ n__________y-g-a-w-l-e-n b-n n-e-n-i-y-.-----------------------------yuggaewol-eun ban nyeon-ieyo.
ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.
ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ.
ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.
ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ.
ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ.
ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ.
ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ.
ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.
ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು.
ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ.
ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ.
ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ.
ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ.
ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ.
ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು.
ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು.
ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ.
ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ.
ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು.
ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು.
ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು .
ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು.
ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು.
ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು.
ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು.
ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು.
ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ.
ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು.
ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.