다음 기-는 오 -------.
다_ 기__ 오 분 후_ 와__
다- 기-는 오 분 후- 와-.
-----------------
다음 기차는 오 분 후에 와요. 0 d---u-----han----- -u--h-e -ayo.d_____ g________ o b__ h__ w____d---u- g-c-a-e-n o b-n h-e w-y-.--------------------------------da-eum gichaneun o bun hue wayo.
ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ.
ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ.
ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ.
ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ.
ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ.
ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು.
ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು.
ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು.
ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು.
ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು.
ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು.
ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು.
ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು.
ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು.
೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು.
ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು.
ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು.
ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು.
ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು..
ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು.
ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ.
ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು.
ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು.
ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು.
ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು.
ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು.
ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು.
ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?